ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್ 27 ಆಗಸ್ಟ್ 2022

""ಎ ಪಿ ಎಸ್ ಕಾಲೇಜಿನಲ್ಲಿ ಕಾಲೇಜು ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು"" 
ಬೆಂಗಳೂರು: ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಆಚಾರ್ಯ ಪಾಠಶಾಲಾ ವಾಣಿಜ್ಯ ಕಾಲೇಜು ನಲ್ಲಿ ಕಾಲೇಜು ದಿನಾಚರಣೆಯನ್ನು ಆಯೋಜನೆ ಮಾಡಲಾಗಿತ್ತು ಸಂಗೀತ ಸಂಯೋಜಕ ವಿದ್ವಾನ್  ಶಶಿಧರ್ ಕೋಟಿ ಹಾಗೂ ಮುಖ್ಯ ಅತಿಥಿಗಳಾದ ಎಸ್ ಲಿಂಗರಾಜು ಎಂಬಿಎ ಮಾಜಿ ಅಧ್ಯಕ್ಷ ಕರ್ನಾಟಕ ರಾಜ್ಯ ನಿಗಮ ಮತ್ತು ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ  ಕೆ.ಪಿ. ನರಸಿಂಹಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಗೌರವ ಕಾರ್ಯದರ್ಶಿ ಪ್ರೊ. ಎ.ಆರ್. ಆಚಾರ್ಯ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಎಪಿಎಸ್ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಪರಮೇಶ್ ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿದರು ಹಾಗೂ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು ತದನಂತರದ ಮುಖ್ಯ ಅತಿಥಿಗಳಾದ ಸಂಗೀತ ಸಂಯೋಜಕ ಶಶಿಧರ ಕೋಟಿ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಇಂದಿನ ಯುವಕರಿಗೆ ಅನಿವಾರ್ಯವಾಗಿದೆ ಈ ವಿದ್ಯಾರ್ಥಿ ಜೀವನದ  ಘಟ್ಟ  ಅತ್ಯಂತ ಪ್ರಮುಖವಾದದ್ದು ತಮ್ಮ ಮಾತೃಭಾಷೆಯನ್ನು ಗೌರವಿಸಿ ಅನ್ಯ ಭಾಷೆಗಳನ್ನು ಪ್ರೀತಿಸಿ ಎಂದರು ಹಾಗೆ ಮತ್ತೊಬ್ಬ ಅತಿಥಿಗಳಾದ ಎಸ್ ಲಿಂಗರಾಜು ತನ್ನ ವಿದ್ಯಾರ್ಥಿಯ ಜೀವನವನ್ನು ನೆನಪಿಸಿಕೊಂಡರು ನಾನು ವಿದ್ಯಾರ್ಥಿಯಾದಾಗ ನನ್ನ ಕಲಿಕೆ ಇಷ್ಟೊಂದು ದುಬಾರಿಯಾಗಿರಲಿಲ್ಲ ಅಂದರೆ ಕಷ್ಟಕರವಾಗಿರಲಿಲ್ಲ ಏಕೆಂದರೆ ಈಗಿನ ಶಿಕ್ಷಣ ಹೊಸ ರೂಪವನ್ನು ಕರ್ನಾಟಕದ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ಬಂದಿರುವಂತಹ  ರಾಷ್ಟ್ರೀಯ ಶಿಕ್ಷಣ ಪಾಲಿಸಿಯನ್ನು ವಿದ್ಯಾರ್ಥಿಗಳಿಗೆ ತಿಳಿ ಪಡಿಸಿದರು ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಕನ್ನಡ ಪ್ರಾಧ್ಯಾಪಕರಾದ ಭಾಗ್ಯಲಕ್ಷ್ಮಿ ಮತ್ತು ಹಲವು ಪ್ರಾಧ್ಯಾಪಕರು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News