ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸರ್ಕಾರಿ ಆರ್ ಸಿ ಕಾಲೇಜಿನಲ್ಲಿ  ಬೃಹತ್ ಉದ್ಯೋಗ ಮೇಳ ಇದೇ ತಿಂಗಳು 26ರಂದು ನಡೆಯಲಿದೆ"" ಬೆಂಗಳೂರು : ನಗರದ ಹೃದಯ ಭಾಗದಲ್ಲಿರುವ ರೇಸ್ ಕೋರ್ಸ್ ರೋಡಿನಲ್ಲಿರುವ ಸರ್ಕಾರಿ ರಾಮ್ ನಾರಾಯಣ್  ಚೆಲ್ಲಾರಾಂ  ವಾಣಿಜ್ಯ ಮತ್ತು ಕಾರ್ಯನಿರ್ವಹಣ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಉದ್ಯೋಗ ವಿನಿಮಯ ಕೇಂದ್ರ ಮತ್ತು ಕೌಶಲ್ಯ ಕರ್ನಾಟಕ  ಉದ್ಯೋಗ  ಸಂಸ್ಥೆ ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲ ಜೀವನೋಪಾಯ ಇಲಾಖೆ ಹಾಗೂ ರೋಟರಿ ಕ್ಲಬ್ ಬೆಂಗಳೂರು ಇವರ ಸಹಯೋಗದೊಂದಿಗೆ  ಉದ್ಯೋಗವನ್ನು  ಒದಗಿಸುವ ದೃಷ್ಟಿಯಿಂದ 200 ಖಾಸಗಿ  ಸಂಸ್ಥೆಗಳು ಸಹಯೋಗದಲ್ಲಿ  ಪ್ರಗತಿ_ ಪಥ 2022 ಬೃಹತ್ ಉದ್ಯೋಗ   ಮೇಳವು ಇದೇ  ತಿಂಗಳ ಆಗಸ್ಟ್ 26ರಂದು ಬೆಳಿಗ್ಗೆ 9:30 ರಿಂದ ಸಂಜೆ 5: ಗಂಟೆ ವರೆಗೂ ಕಾಲೇಜಿನ ಆವರಣದಲ್ಲಿ  ಜರುಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಬಿ ಚಂದ್ರಶೇಖರ್ ತಿಳಿಸಿದರು  ಭಾಗವಹಿಸುವ ಆಸಕ್ತ ಅಭ್ಯರ್ಥಿಗಳಿಗೆ ಸಾಮಾನ್ಯ ಪದವಿ ದರರು ಬಿ.ಎ. ಬಿ.ಕಾಂ . ಬಿ.ಬಿ.ಎ. ಬಿ.ಎಸ್ಸಿ. ಮತ್ತು ಡಿಪ್ಲೋಮೋ ಇಂಜಿನಿಯರಿಂಗ್ ಪದವಿ ಹಾಗೂ  ಸ್ನಾತಕೋತ್ತರ  ಪದವೀಧರರು  ಪದವಿ ಅಂತಿಮ ಸೆಮಿಸ್ಟರ್ ನಲ್ಲಿರುವ ಅಭ್ಯರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷೆಗಳು ಕೂಡ  ಸ್ವ  ವಿವರಗಳ (ಬಯೋಡೇಟಾ) ಹಲವು ಪ್ರತಿಗಳೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಬಹುದು  

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News