ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಅಜ್ಞಾನ ಮತ್ತು ಅಂಧಕಾರದಲ್ಲಿ ಮುಳುಗಿದ್ದವರನ್ನು ಎತ್ತಲು ಬಂದವರು ಬಸವಣ್ಣ: ಮಾತೆ ಓಂಕಾರೇಶ್ವರಿ



ಪೀಣ್ಯ ದಾಸರಹಳ್ಳಿ:' ಮನುಷ್ಯನು ಅಜ್ಞಾನ ಮತ್ತು ಅಂಧಕಾರದಲ್ಲಿ ಮುಳುಗಿದ್ದವನನ್ನು ಎತ್ತಲು ಬಂದವರು ಬಸವಣ್ಣ' ಎಂದು ಬಸವ ಜ್ಞಾನ ಸೆಂಟರ್ ಅಧ್ಯಕ್ಷೆ ಪೂಜ್ಯಶ್ರೀ ಓಂಕಾರೇಶ್ವರಿ ತಿಳಿಸಿದರು.
   ಚಿಕ್ಕಬಾಣಾವರದ ರಾಘವೇಂದ್ರ ಕಲಾಮಂದಿರದಲ್ಲಿ ವಿಶ್ವ ವೀರಶೈವ ವೇದಿಕೆ ಸಹಯೋಗದೊಂದಿಗೆ ಶ್ರೀ ವೀರಶೈವ ಲಿಂಗಾಯಿತ ವೇದಿಕೆ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಹುಟ್ಟುಹಬ್ಬ, 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಬಸವ ಜಯಂತಿ ಮತ್ತು ರೇಣುಕಾಚಾರ್ಯ ಜಯಂತಿ ಹಾಗೂ ಲಿಂಗ ದೀಕ್ಷೆ ಕಾರ್ಯಕ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.
    ' ಇಂದಿನ ದಿನದಲ್ಲೂ ಕೂಡ ಜಗತ್ತಿನಲ್ಲಿ ಮೂಢನಂಬಿಕೆಯನ್ನು ದಾಟಿ ಹೋದಾಗ ಸತ್ಯ ಗೊತ್ತಾಗುತ್ತದೆ. ಗುರು ಬಸವಣ್ಣನವರು ಆಧ್ಯಾತ್ಮ ಜೀವಿ, ಅವರು ನೀಡಿದ ಬೆಳಕಿನ ತತ್ವ ವಿಶ್ವಕ್ಕೆ ಮಾದರಿಯಾಗಿದೆ. ಮನುಷ್ಯ ಆಧ್ಯಾತ್ಮಿಕವನ್ನು ಶರಣಾಗತಿಯನ್ನು ಮಾಡಿಕೊಳ್ಳಬೇಕು' ಎಂದು ತಿಳಿಸಿದರು.
    ಎಮ್ ಎಚ್ ಪಾಟೀಲ್ ಮಾತನಾಡಿ 'ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಮ್ಮ ಸಮುದಾಯದ ಹಿರಿಯ ಜೀವಗಳಿಗೆ ಅಭಿನಂದನೆ ಮತ್ತು ಉಚಿತ ಲಿಂಗ ದೀಕ್ಷೆಯನ್ನು ಮಾಡುತ್ತಾ ಬಂದಿದ್ದೇವೆ, ಮುಂದೆಯೂ ಕೂಡ ಸ್ವಾಮಿಗಳ ಆಶೀರ್ವಾದದಿಂದ ಸಮುದಾಯದ ಏಳಿಗೆಗೆ ಶ್ರಮಿಸಲಾಗುವುದು' ಎಂದು ತಿಳಿಸಿದರು.
   ಈ ಸಂದರ್ಭದಲ್ಲಿ ವೀರಶೈವ ಹಿರಿಯ ಮಹಿಳಾ ಮುಖಂಡರಾದ ಸಿದ್ದಗಂಗಮ್ಮ, ಸುಂದರಮ್ಮ, ಮತ್ತು ಭಾಗ್ಯಮ್ಮ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
    ಖಾನಿ ಮಠದ ಅಧ್ಯಕ್ಷರಾದ ಶ್ರೀ ಬಸವರಾಜ ಸ್ವಾಮೀಜಿ, ಸಾಹಿತಿ ವೈ ಬಿ ಎಚ್ ಜಯದೇವ್, ವೀರಶೈವ ಅಭಿವೃದ್ಧಿ ಸಂಘದ ಅಧ್ಯಕ್ಷ  ಜಿ. ರಾಜೇಂದ್ರ, ಬಸವಶ್ರೀ ಸೊಸೈಟಿಯ ಉಪಾಧ್ಯಕ್ಷ ಸೋಮಶೇಖರ್ ಅಕ್ಕನ ಬಳಗದ ಅಧ್ಯಕ್ಷೆ ಪ್ರೇಮ ಆರಾಧ್ಯ, ವೀರಶೈವ ಮುಖಂಡರಾದ ಸೋಲಾರ್ ಸುಬ್ಬಣ್ಣ, ಗಂಗಾಧರ್,  ಮಾದೇವಪ್ಪ, ಎಂ ಬಸವರಾಜು, ಮಹದೇವ್ ಮುಂತಾದವರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News