ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"₹ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೀಸಲಾತಿ ಅಗ್ರಹಿಸಿ ರಾಜ್ಯ ಮತ್ತು ಜಿಲ್ಲಾ ತಾಲೂಕು ಮಟ್ಟದಲ್ಲಿ ಹೋರಾಟ""
 ಬೆಂಗಳೂರು: ನಗರದ  ಸದಾಶಿವನಗರ ರಮಣ ಮಹರ್ಷಿ ರಸ್ತೆಯಲ್ಲಿರುವ ವೀರಶೈವ ಲಿಂಗಾಯತರ ಭವನದಲ್ಲಿ ರಾಜ್ಯ ಘಟಕದ ಅಧ್ಯಕ್ಷರಾದ ಎನ್ ತಿಪ್ಪಣ್ಣನವರು ಬೆಂಗಳೂರು ನಗರ ಅಧ್ಯಕ್ಷ ಗುರುಸ್ವಾಮಿ  ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
 ಈ ಸಂದರ್ಭದಲ್ಲಿ ಎಲ್ಲಾ ಪಂಗಡಗಳಿಗೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ರಾಜ್ಯ ಮತ್ತು ಜಿಲ್ಲಾ ತಾಲೂಕು ಮಟ್ಟದಲ್ಲಿ ಆಗಸ್ಟ್ 1. ಬೆಂಗಳೂರು ಫ್ರೀಡಂ ಪಾರ್ಕ್ ನಿಂದ ಜಿಲ್ಲಾಧಿಕಾರಿ ಗಳ ಕಚೇರಿ ವರೆಗೂ ಮಠಾಧೀಶರು ಆಗುವ ಅಖಿಲ ಭಾರತ ಲಿಂಗಾಯಿತ ಮಹಾಸಭಾ ಮುಖಂಡರು ಮನವಿ ಸಲ್ಲಿಸುವ ಹಿನ್ನೆಲೆಯಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ  ಆಗಮಿಸಬೇಕು ಎಂದು ರಾಜ್ಯಧ್ಯಕ್ಷರು ಎನ್ ತಿಪ್ಪಣ್ಣನವರು ಹೇಳಿದರು ಈ ಗೋಷ್ಠಿಯಲ್ಲಿ ಮಾತನಾಡಿದ ಅವರು "ಸರ್ವರಿಗೂ ಸಾಮಾಜಿಕ ನ್ಯಾಯದ "ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಮಹಾನ್ ಬಸವೇಶ್ವರ ಅನುಯಾಯಿಗಳಾದ ಲಿಂಗಾಯತ ಸಮುದಾಯವು ನ್ಯಾಯದಿಂದ ವಂಚಿತರಾಗಿದ್ದಾರೆ ಹೀಗಾಗಿ ನಮ್ಮ ಹೋರಾಟ ಸಂವಿಧಾನ ಬದ್ಧವಾಗಿರುವುದು 15.(4) ಮತ್ತು 16 (4) ಅನುಚ್ಛೇದಗಳು ಬದ್ಧವಾಗಿದ್ದು ನಮ್ಮ ಬೇಡಿಕೆ  ಈಡೇರಿಸಬೇಕು ಎಂದು ನಮ್ಮ ಸಮುದಾಯದ ಬೇಡಿಕೆಗೆ ಸ್ಪಂದಿಸಿದ್ದಾರೆ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ  ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು ಬೆಂಗಳೂರು ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಸ್. ಗುರುಸ್ವಾಮಿ ಕರ್ನಾಟಕ ಮತ್ತು ಆಂಧ್ರ ಕೇರಳ ಮಹಾರಾಷ್ಟ್ರ ತೆಲಂಗಾಣ ತಮಿಳುನಾಡು ರಾಜ್ಯಗಳಲ್ಲಿ ಸಮುದಾಯದ ಜನರಿದ್ದಾರೆ ಕರ್ನಾಟಕದಲ್ಲಿ ಸುಮಾರು ಶೇಕಡ 18 ರಿಂದ 20 ರಷ್ಟು ಜನರು ಈ ಸಮುದಾಯದಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರಿದಿದ್ದಾರೆ ಎಂದು ಕೆಲವರು ವಾದಿಸುತ್ತಾರೆ ಆದರೆ ಶೇಕಡ 85ರಷ್ಟು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಇವರು ಇದ್ದಾರೆ ಈ ಸಮುದಾಯದಲ್ಲಿ   ಎಂದರು  ಅವರನ್ನು  ಕೇಂದ್ರದ ಹಿಂದುಳಿದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿದರು ಈ ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ     ಕೇಂದ್ರ ಲೋಕಸೇವಾ ಆಯೋಗ ಬ್ಯಾಂಕಿಂಗ್ ರೈಲ್ವೆ ನೇಮಕಾತಿ ಮಂಡಳಿ ಸ್ಟಾಪ್ ಸೆಲೆಕ್ಷನ್ ಕಮಿಷನ್ ಮತ್ತು ಕೇಂದ್ರ ಸರ್ಕಾರದ ಉದ್ಯಮಿಗಳು ನೇಮಕಾತಿಯಲ್ಲಿ       ಐಐಟಿ ಮತ್ತು  ಸಂಸ್ಥೆಗಳಾದ ರಾಷ್ಟ್ರೀಯ ಪ್ರಾಮುಖ್ಯತೆ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ  ಪಡೆಯಲಾಗದೆ  ವಂಚಿತರಾಗಿದ್ದಾರೆ ಎಂದು ವಿವರಿಸಿದರು ಅವರು ವೀರಶೈವ ಲಿಂಗಾಯತ ಸಮುದಾಯದಲ್ಲಿ ಸುಮಾರು 88 ಉಪ ಪಂಗಡಗಳಿಗೆ ಆದರೆ ಕೇವಲ 14 ಉಪಪಂಗಡಿಗಳಿಗೆ ಮಾತ್ರ ಕೇಂದ್ರ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸಲಾಗಿದೆ ಯಾವುದೇ  ಸಮುದಾಯಕ್ಕೂ  ಅನ್ಯಾಯವಾಗಬಾರದು ಎನ್ನುವುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ  ನಿಲುವು ಈ ಕಾರಣದಿಂದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಇಡೀ ದೇಶ ವ್ಯಾಪ್ತಿ ಏಕಕಾಲದಲ್ಲಿ  ಏಕಕಾಲದಲ್ಲಿ ಆಗಸ್ಟ್  ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ನಿರ್ಧರಿಸಿದೆ ಎಂದು ತಿಳಿಸಿದರು  ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಘಟಕ ಪ್ರಧಾನ ಕಾರ್ಯದರ್ಶಿ ಜಿಎಸ್ ಮೃತ್ಯುಂಜಯ ಸ್ವಾಮಿ ಹಾಗೂ ಬಾಲಚಂದ್ರ ಡಿ ಬಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಂಗಮ್ಮ ಬಸವರಾಜ್ ಘಟಕದ ಪದಾಧಿಕಾರಿಗಳು ಹಾಗೂ ಸಮುದಾಯದ ಬಂಧುಗಳು ಸೇರಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News