ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
*ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್* ರವರ ನೇತೃತ್ವದಲ್ಲಿ ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ *ರಾಜಗೋಪಾಲನಗರ,ಪೀಣ್ಯ ಕೈಗಾರಿಕಾ ಪ್ರದೇಶ ಹೆಗ್ಗನಳ್ಳಿ ಹಾಗೂ ಚೊಕ್ಕಸಂದ್ರ ವಾರ್ಡ್ ಗಳಲ್ಲಿ* ಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದು *ಜನತಾಮಿತ್ರ* ಅಭಿಯಾನದ 2ನೆೇ ದಿನದ ಕಾರ್ಯಕ್ರಮದಲ್ಲಿ *ರಾಜಗೋಪಾಲನಗರ ವಾರ್ಡ್ ಅಧ್ಯಕ್ಷ ರಾದ ರುದ್ರೇಗೌಡ ರವರ ಫ್ರೆಂಡ್ಸ್ ಸರ್ಕಲ್ ನಲ್ಲಿ ಜೆಡಿಎಸ್* ವಾರ್ಡ್ ಕಚೇರಿಯನ್ನು ಉದ್ಘಾಟಿಸಿದರು ಹಾಗೂ *ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ನಲ್ಲಿ ಸಿ ಜೆ ರಮೇಶ್* ರವರ ವಾರ್ಡ್ ಕಚೇರಿಯನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ *ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ* ರವರು ಈ ಭಾಗದ ಜನರ ಅಭಿಮಾನ ಹಾಗೂ ಪ್ರೀತಿಗೆ ನಾವು ಚಿರರುಣಿ. *ಬೆಂಗಳೂರು ಅಭಿವೃದ್ಧಿಗೆ ಸಿಂಹಪಾಲು ಕೊಡುಗೆ ದೇವೆಗೌಡರದು. ಅವರ ದೂರದೃಷ್ಟಿಯ ಫಲ ಇಂದು ಕಾವೇರಿ ಐದನೇ ಹಂತದ ನೀರು, ಮೆಟ್ರೋ, ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಫ್ಲೈ ಓವರ್, ನಂದಿನಿ ಲೇಔಟ್, ಕಾಮಾಕ್ಷಿಪಾಳ್ಯ, ಲಗ್ಗೆರೆ ಗ್ರಾಮ ಗಳಂತಹ ರೆವಿನ್ಯೂ ಬಡಾವಣೆಗಳ ಸಮಸ್ಯೆಗಳನ್ನು ಬಗೆಹರಿಸಿದ ಕೀರ್ತಿ ದೇವೇಗೌಡರದು ಎಂದರು, ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನೀವು *ಜನತಾ ಯಾತ್ರೆ*ಯನ್ನು ಯಶಸ್ವಿಗೊಳಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.* ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಶಾಸಕರು *ಈ ಭಾಗದಲ್ಲಿ ಇದ್ದಂತಹ ಮಹಾನುಭಾವರು ಅಭಿವೃದ್ಧಿಯನ್ನು ಕಡೆಗಣಿಸಿ ಲೂಟಿ ಮಾಡುವುದನ್ನು ಕಾಯಕವಾಗಿಸಿಕೊಂಡಿದ್ದರು, ಯಾರೋ ಒಬ್ಬ ವ್ಯಕ್ತಿಯ ಹಿಂದೆ ಬಿದ್ದು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರನ್ನು ಮರೆಯಬೇಡಿ, ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಮ್ಮ ಶಕ್ತಿ ಏನೆಂದು ತೋರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಮುನಿಸ್ವಾಮಣ್ಣ, ವಾರ್ಡ್ ಅಧ್ಯಕ್ಷರಾದ ರುದ್ರೇಗೌಡ, ಸಿ ಜೆ ರಮೇಶ್, ನರಸಿಂಹಮೂರ್ತಿ, ಎಚ್ ಆರ್ ಪ್ರಕಾಶ್, ಗೋವಿಂದಪ್ಪ, ಜಯರಾಂ ನರಸಿಂಹ, ಗೋಪಾಲಕಷ್ಣ, ಶಿವಪುರ ರಾಮಣ್ಣ, ವಿನಯ್ ಶಿವಣ್ಣ, ಮುನೇಗೌಡ, ಚರಣ್ ಗೌಡ, ನರಸಿಂಹಮೂರ್ತಿ, ಎಲ್ಲ ವಾರ್ಡ್ ಗಳ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯಕರ್ತರು ಯುವ ಮುಖಂಡರು,ಮಹಿಳಾ ಮುಖಂಡರು ಹಾಜರಿದ್ದರು.*