ಕರ್ನಾಟಕ ಪಾಸ್ಟ್ ಎಕ್ಸ ಪ್ರೆಸ್ ನ್ಯೂಸ್

75ನೇ ವರ್ಷದ ಸ್ವಾತಂತ್ರೋತ್ಸವ ಮತ್ತು ಪಕ್ಷ ಬಲವರ್ಧನೆ ಪೂರ್ವಭಾವಿ ಸಭೆ 
ಪೀಣ್ಯ ದಾಸರಹಳ್ಳಿ :ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪಿ.ಎನ್. ಕೃಷ್ಣಮೂರ್ತಿಯವರು    ಮತ್ತು ಮಾಜಿ ಬಿಬಿಎಂಪಿ ಸದಸ್ಯ ಕೆ ನಾಗಭೂಷಣ್ ರವರು ಶ್ರೀ ಕೃಷ್ಣ ಚಂದ್ರ ಕನ್ವೆನ್ಷನ್ ಹಾಲ್ನಲ್ಲಿ 75 ವರ್ಷದ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮತ್ತು  ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆಯನ್ನು ಆಯೋಜಿಸಿದರು ಈ ಸಭೆಯಲ್ಲಿ ಭಾಗವಹಿಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಪಿಎನ್ ಕೃಷ್ಣಮೂರ್ತಿ ಅವರು ರಾಜ್ಯ ಕೆ ಪಿ ಸಿ ಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಆದೇಶದಂತೆ ಮುಂಬರುವ 75 ನೆಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಹಾಗೆ ಸಿದ್ದರಾಮಯ್ಯೋತ್ಸವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಬರುವ ಕಾರ್ಯ ಕರ್ತರಿಗೆ ಬಸ್ಸಿನ ವ್ಯವಸ್ಥೆ   ಮತ್ತು ಊಟದ ವ್ಯವಸ್ಥೆಯನ್ನು ನಾವು ಕಲ್ಪಿಸಿ ಕೊಡುತ್ತೇವೆ
 ನಂತರ ಸಭೆಗೆ ಗೈರಾದ ಅಧ್ಯಕ್ಷರು ಮತ್ತು ವಾರ್ಡ್ ಅಧ್ಯಕ್ಷರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಕರೆ ನೀಡಿದರು ಪಕ್ಷದ ಚಟುವಟಿಕೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ  ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು
 ಇದೇ ಸಭೆಯಲ್ಲಿ ಮಾಜಿ ಬಿಬಿಎಂಪಿ ಸದಸ್ಯ ಕೆ. ನಾಗಭೂಷಣ್ ಎಲ್ಲಾ ಪದಾಧಿಕಾರಿಗಳಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮ ಗಳಿಗೆ ತಪ್ಪದೇ ಹಾಜರಿದ್ದು ಪಕ್ಷಕ್ಕೆ  ನಿಮ್ಮ ಸಹಕಾರ ನೀಡುವಂತೆ ಕೋರಿದರು  ಹಾಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉತ್ಸವ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಎಲ್ಲಾ ಕಾರ್ಯಕರ್ತರನ್ನು ಕರೆತನ್ನಿ ಮತ್ತು ಮಹಿಳಾ ಕಾರ್ಯಕರ್ತರಿಗೆ  ಭದ್ರತೆ ಕಾಳಜಿಯನ್ನು ವಹಿಸಲಾಗುವುದು ಎಂದು ಎಂದು ತಿಳಿಸಿದರು
ಮುಂಬರುವ ಆಗಸ್ಟ್ ಒಂದರಿಂದ 13 ರವರೆಗೆ ಎಲ್ಲಾ ವಾರ್ಡುಗಳಲ್ಲಿ  ಸ್ಕೂಲ್ ಗಳಲ್ಲಿ ವಿವಿದಾ ಸ್ಪರ್ಧೆಗಳು ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ವಿಶೇಷವಾಗಿ ಮಹಿಳೆಯರಿಗೆ ರಂಗೋಲಿ  ಸ್ಪರ್ಧೆಗಳನ್ನು ಏರ್ಪಡಿಸಿಕೊಳ್ಳಿ ಹಾಗೆ ಕ್ಷೇತ್ರದ ಕಾರ್ಯಕರ್ತರ ಮನೆ ಮೇಲೆ ದೇಶದ ತ್ರಿಗುಣ ಧ್ವಜ ಹಾಗೂ ಕಾಂಗ್ರೆಸ್ ಬಾವುಟವನ್ನು   ಅಗಸ್ಟ್ 1ರಿಂದ 15 ರವರೆಗೆ   ಹಾರಿಸುವುದು  ಎಂದು ತಿಳಿಸಿದರು
  ಈ ಸಭೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಕುಮಾರ್  ಮುಖಂಡರಾದ ಏರ್ಟೆಲ್ ಸೋಮಣ್ಣ ಜೀಜು ವರ್ಗೀಸ್ ಬ್ಲಾಕ್ ವಾರ್ಡ್ ಅಧ್ಯಕ್ಷರಾದ ನಿರ್ಮಲಮ್ಮ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಗಳ ಅನುಸೂಯಮ್ಮ ಯುವ ಕಾಂಗ್ರೆಸ್ ಅಧ್ಯಕ್ಷರಾದಕ್ಷಿತ್ ಬೆಂಗಳೂರು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಹಿರಿಯ ಮುಖಂಡರು ರಾಬರ್ಟ್ ರಾಜಗೋಪಾಲ್ ನಗರದ ವಾರ್ಡ್ ಅಧ್ಯಕ್ಷ ಪ್ರಕಾಶ್ ಚೊಕಸಂದ್ರ ವಾರ್ಡ್ ಅಧ್ಯಕ್ಷ ಅಬ್ದುಲ್ ಬಾಬು ಮತ್ತು ಇನ್ನೂ ಮುಂತಾದವರು ಹಾಜರಿದ್ದರು.ಟೋಕಸಂದ್ರ

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News