ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ವೀರಶೈವ ಅಭಿವೃದ್ಧಿ ಸಮಿತಿಯಿಂದ 20ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮ ""
ಪೀಣ್ಯ ದಾಸನಹಳ್ಳಿ: ಕ್ಷೇತ್ರದ ಚಿಕ್ ಬಾಣವರದ ಕೆರೆ ಗುಡ್ಡದಹಳ್ಳಿ ಗಂಗಾಧರೇಶ್ವರ ಕಲ್ಯಾಣ ಮಂಟಪದಲ್ಲಿ 20ನೇ ವರ್ಷದ ಬಸವ ಜಯಂತಿಯನ್ನು ಶಿವಗಂಗೆ ಹೊನ್ನಮ್ಮ ಗವಿ ಮಠ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟನೆಯನ್ನು ಮಾಡಿದರು
ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕಲೆ ಮತ್ತು ಸಾಂಸ್ಕೃತಿಕ ವಿಜೇತರಿಗೂ ಸನ್ಮಾನಗಳನ್ನು ಆ ಯೋಜನೆ ಮಾಡಲಾಗಿತ್ತು
ಈ ಸಮಯದಲ್ಲಿ ನೆಲಮಂಗಲದ ಪವಾಡ ಬಸವಣ್ಣ ದೇವರ ಮಠ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಈಗಿನ ಮಕ್ಕಳಿನ ಕಂಪ್ಯೂಟರ್ ಮೈಂಡ್ ಒಂದು ಸಾರಿ ಹೇಳಿದರೆ ಸಾಕು ಮತ್ತು ಕೇಳಿಸಿಕೊಂಡರೆ ಅದನ್ನು ನೆನಪಿನಲ್ಲಿಟ್ಟುಕೊಂಡು ಹಾಗೆ ತಮ್ಮ ಬುದ್ಧಿವಂತಿಕೆಯ ಕ್ರಿಯಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಅವರ ಪೋಷಕರು ಸಹಕಾರಿಯಾಗಿ ತಮ್ಮ ಮಕ್ಕಳ ಭವಿಷ್ಯತ್ ಗಾಗಿ ಒಳ್ಳೆಯ ಸಂಸ್ಕಾರಗಳನ್ನು ಕಲಿಸಿಕೊಡಬೇಕಾಗುತ್ತದೆ ಬರೀ ಓದುವುದು ಅಷ್ಟೇ ಅಲ್ಲ ತನ್ನ ತಾತ ಅಜ್ಜಿ ಸಂಬಂಧಿಕರು ಅವರಿಗೆ ಪರಿಚಯ ಮಾಡಿಕೊಡಬೇಕಾಗುತ್ತದೆ ಈಗಿನ ಬ್ಯುಸಿ ಶೆಡ್ಯೂಲ್ ನಲ್ಲಿ ತನ್ನ ಮಕ್ಕಳಿಗೆ ಬಿಡಿವಿನ ಸಮಯದಲ್ಲಿ ಮಕ್ಕಳಿಗಾಗಿ ಸಮಯವನ್ನು ಕಳೆಯಬೇಕಾಗುತ್ತದೆ ಮಕ್ಕಳ ಜೊತೆಗೆ ಕಷ್ಟ ಮತ್ತು ಸಂತೋಷದ ವಿಷಯಗಳನ್ನ ವಿನಿಮಯ ಮಾಡಿ ಕೊಡಬೇಕಾಗುತ್ತದೆ ವೀರಶೈವ ಅಭಿವೃದ್ಧಿ ಸಮಿತಿಯು ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪುರಸ್ಕಾರ ಗಳು ಮತ್ತು ಅಭಿನಂದನೆ ಗಳು ಈ ಸಮಿತಿಯವರಿಗೆ ಹೆಚ್ಚು ಹೆಚ್ಚು ಇಂಥ ಕಾರ್ಯಕ್ರಮಗಳು ಮಾಡಲಿ ಆ ಭಗವಂತ ಆ ಶಕ್ತಿ ನೀಡಲಿ ಎಂದು ಆಶೀರ್ವಚನ ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಮುನಿರಾಜು, ಕ್ಷೇತ್ರದ ಶಾಸಕ ಆರ್ ಮಂಜುನಾಥ್, ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ ಮರಿಸ್ವಾಮಿ, ಪಾಲಿಕೆ ಮಾಜಿ ಸದಸ್ಯ ನಾಗಭೂಷಣ್. ಕೆ. ಸಮಿತಿಯ ಅಧ್ಯಕ್ಷ ಜಿ .ರಾಜೇಂದ್ರ ,ರಾಜ್ಯ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಜಿ .ಮನೋಹರ್ ,ಮಾಜಿ ಪಂಚಾಯತಿ ಸದಸ್ಯ ಶಿವಕುಮಾರ್ , ದಾಸರಹಳ್ಳಿ ವಿಶ್ವ ವೀರಶೈವ ಅಧ್ಯಕ್ಷ ಎಂ .ಹೆಚ್. ಪಾಟೀಲ್, ಸೋಲಾರ್ ಸುಬ್ಬಣ್ಣ, ಸುಜಾತ ಮೇಲೇ ಗೌಡ ಉಪಾಧ್ಯಕ್ಷ ಗಂಗಾಧರ್, ಗೌರವಾಧ್ಯಕ್ಷ ಕೆ.ಎಂ. ಸೋಮಶೇಖರ್, ಖಜಂಚಿ ಸಿ. ಬಸವರಾಜ್, ಸಹ ಖಜಾಂಚಿ ಬಸವರಾಜ್ ,ಸಂಚಾಲಕ ಆರ್. ಪರಮೇಶ್ ಸಂಘಟನಾ ಕಾರ್ಯದರ್ಶಿಗಳಾದ ದಿನೇಶ್, ಪುಷ್ಪ, ವೀರೇಂದ್ರ ,ಈ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮುಂತಾದವರು ಭಾಗಿಯಾಗಿದ್ದರು .