ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಪೀಣ್ಯ ದಾಸರಹಳ್ಳಿ :ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ಎ.ಎಸ್.ಬಿ ಬಡಾವಣೆಯ ನಿವಾಸಿಗಳು ಆಯೋಜಿಸಿದ್ದ ಕುಂದು ಕೊರತೆಗಳ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮಕ್ಕೆ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದರು ನಂತರ ಇಡೀ ಕ್ಷೇತ್ರದ ಅಭಿವೃದ್ಧಿಗೆ 24 7 ಎಂದು ಈ ಕ್ಷೇತ್ರದ ಜನ ನನ್ನನ್ನ ಗೆಲ್ಲಿಸಿ ಶಾಸಕನಾಗಿ ಮಾಡಿರುವುದರಿಂದ ರಾತ್ರಿಹಗಳು ನಿಮ್ಮ ಸೇವಕನಾಗಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಲ್ಲೇ ಕುಂದು ಕೊರತೆಗಳು ಕಂಡಲ್ಲಿ ನನಗೆ ನೇರವಾಗಿ ಫೋನ್ ಮೂಲಕ ಅಥವಾ ನನ್ನ ಕಚೇರಿಗೆ ಬಂದು ಖುದ್ದಾಗಿ ಹೇಳಿಕೊಂಡರೆ 24 ಗಂಟೆಗಳ ಒಳಗೆ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆಯನ್ನು ಕೊಟ್ಟರು ಈ ಸಂದರ್ಭದಲ್ಲಿ ಕ್ಷೇತ್ರದ ಸಂಯೋಜಕರು ಹಾಗೂ ಉಸ್ತುವಾರಿಗಳಾದ ಕೆ ಸಿ ವೆಂಕಟೇಶ್, ಹಿರಿಯ ಜೆಡಿಎಸ್ ಮುಖಂಡರಾದ ಜಯರಾಮ್ ನರಸಿಂಹ, ಯುವ ಘಟಕದ ಅಧ್ಯಕ್ಷರಾದ ವಿನಯ್ ಶಿವಣ್ಣ,ಅಧ್ಯಕ್ಷರಾದ ನರಸಿಂಹ ಮೂರ್ತಿ, ಸಿ.ಜೆ.ರಮೇಶ್,ದೇವರಾಜ್, ಕುಮಾರ್,ಬಾಂಬು ನಯಾಜ್, ನಯಾಜ್, ರಮೇಶ್, ಕಾರ್ಯಕರ್ತರು ಮುಖಂಡರು ನಿವಾಸಿಗಳು ಹಾಜರಿದ್ದರು.