ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಗುರುಪೂರ್ಣಿಮೆಯ ಪ್ರಯುಕ್ತ ಹೆಗ್ಗನಹಳ್ಳಿ ದೊಡ್ಡಣ್ಣ ಶಾಲೆಯ ಆವರಣದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಆರ್ ಮಂಜುನಾಥ್ ದೇವರ ಕೃಪೆಗೆ ಪಾತ್ರರಾದರು. ಹಾಗೂ ಇದೇ ಸಂದರ್ಭದಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ಸುಶೃತಿ ಬ್ಯಾಂಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನ ಖುದ್ದು ಪರಿಶೀಲಿಸಿದರು. ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರುಗಳಾದ ರುದ್ರೇಗೌಡ, ನರಸಿಂಹಮೂರ್ತಿ, ಮಂಜೇಗೌಡ, ಎಚ್.ಆರ್ ಪ್ರಕಾಶ್, ವಿನಯ್ ಶಿವಣ್ಣ,ಗಿರಿಗೌಡ,ಭೀಮಣ್ಣ, ಸುರೇಶ್, ಸಾಗರ್, ಚಂದ್ರು, ಬೊಂಬು ನಯಾಜ್,ರಮೇಶ್, ಸ್ವಾಮಿ, ಸೋಮು, ಮುಸ್ತತು, ನಂಜೇಗೌಡ ವಿಜಯ್, ಶಿವು,ಅಜ್ಜು, ನಯಾಜ್,ಮಹಿಳಾ ಮುಖಂಡರು ಕಾರ್ಯಕರ್ತರು ಹಾಜರಿದ್ದರು.