Posts

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
ಉನ್ನತ ಶಿಕ್ಷಣ ಇಲಾಖೆ ನಾನ್ ‌‌ಯು.ಜಿ.ಸಿ. ಉಪನ್ಯಾಸಕರನ್ನು ಕೈ ಬಿಟ್ಟು ಕೌನ್ಸಿಲಿಂಗ್ ಗೆ ಮುಂದಾಗಿದೆ   ಬೆಂಗಳೂರು  ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ನಿಯೋಗ ಬೆಂಗಳೂರು ನಲ್ಲಿ ಅತಿಥಿ ಉಪನ್ಯಾಸಕರ ನಿಯಮಬಾಹಿರ ನೇಮಕಾತಿ ,ಕೌನ್ಸಲಿಂಗ್ ಪ್ರಕ್ರಿಯೆಯಿಂದಾಗಿ ಯುಜಿಸಿ ಅರ್ಹತೆ ಪಡೆಯದ  6,000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಶಾಶ್ವತವಾಗಿ  ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಇವರ ದೀರ್ಘಕಾಲದ ಸೇವೆಯನ್ನು ಮಾನವೀಯತೆ ದೃಷ್ಟಿಯಿಂದ ಪರಿಗಣಿಸಿ,ಉದ್ಯೋಗ ರಕ್ಷಣೆ ಮಾಡಬೇಕಾಗಿದೆ. ಈಗ ಉದ್ಬವಿಸಿರುವ ಕಾನೂನಾತ್ಮಕ ಬಿಕ್ಕಟ್ಟನ್ನು ಸಚಿವ ಸಂಪುಟ ಸಭೆಗೆ ತಂದು, ನ್ಯಾಯ ಒದಗಿಸಿಕೊಡ ಬೇಕೆಂದು  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ  ಎಚ್. ಕೆ. ಪಾಟೀಲ್ ಹಾಗೂ   ಸಮಾಜ ಕಲ್ಯಾಣ ಇಲಾಖೆ .ಎಚ್ ಸಿ. ಮಹಾದೇವಪ್ಪ ರವರಿಗೆ ಭೇಟಿ ಮಾಡಿ ಮನವಿ ಮಾಡಲಾಯಿತು.  ಸಕರಾತ್ಮಕವಾಗಿ ಸ್ಪಂದಿಸಿ, ಹಾಗೂ  ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡುವುದಾಗಿ ಬರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಾ. ಸೋಮಶೇಖರ್  ಎಚ್. ಶಿಮೊಗ್ಗಿ, ಡಾ. ರವೀಂದ್ರ, ಜೆ. ಸಿ. ರಾಜೇಶ್ ಕುಮಾರ್. ಕೆ. ಡಾ. ಅನಂತ್, ಸತೀಶ್, ಹರ್ಷಿತ, ಪೂರ್ಣಿಮಾ, ರಾಜೇಂದ್ರ ಬಾಬು, ಶ್ರೀನಿವಾಸ್, ನಿರುಪಮಾ, ಸುನೀತಾ ಮೇಡಂ, ದೀಲೀಪ, ಇನ್ನು ಅನೇಕ ಅತಿಥಿ ಉಪನ್ಯ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
""ರೈತರ ಬೆಳೆಯುವ ಬೆಳೆಗೆ ಬೆಂಬಲ ಬೆಲೆ ನೀಡಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ"" "ರಾಜ್ಯದ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಮಾಯವಾಗಿದ್ದಾರಾ?" ವಿಧಾನಸೌಧದ 3ನೇ ಮಹಡಿಯಲ್ಲಿ ಶಾಸಕರ ಖರೀದಿ ಕೇಂದ್ರ:  ಎಂ.ಪಿ.ರೇಣುಕಾಚಾರ್ಯ ಆರೋಪ ಬೆಂಗಳೂರು: ಮೆಕ್ಕೆ ಜೋಳ, ಭತ್ತ, ಈರುಳ್ಳಿ ಖರೀದಿ ಕೇಂದ್ರಗಳನ್ನು ತೆರೆಯಬೇಕಾದ ರಾಜ್ಯದ ಕಾಂಗ್ರೆಸ್ ಸರಕಾರವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಶಾಸಕರ ಖರೀದಿ ಕೇಂದ್ರವನ್ನು ಪ್ರಾರಂಭಿಸಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ರೇಕ್ ಫಾಸ್ಟ್ ಸಭೆಯಲ್ಲಿ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ರೈತರ ಸಮಸ್ಯೆ, ಕೇಂದ್ರ ಸರಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆ ಕುರಿತು ಚರ್ಚೆ ಮಾಡಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷವು ನಾಡಿನ ಪ್ರಜ್ಞಾವಂತ ಮತದಾರರಿಗೆ ಅಪಮಾನ ಮಾಡಿದೆ ಎಂದು ದೂರಿದರು. ನಾಟಿ ಕೋಳಿ ಸವಿದುದು, ತಟ್ಟೆ ಇಡ್ಲಿ ತಿಂದದ್ದು, ಯಾರು ಬಡಿಸಿದರೆಂಬುದೇ ವರ್ಣರಂಜಿತವಾಗಿ ರಾಷ್ಟ್ರ- ಅಂತರರಾಷ್ಟ್ರ ಮಟ್ಟದ ದೊಡ್ಡ ಸುದ್ದಿಯಾಗಿದೆ ಎಂದ ಅವರು, ರಾಜ್ಯದಲ್ಲಿ 30 ತಿಂಗಳು ಅಧಿಕಾರ ನಡೆಸಿದ ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಜಾಸ್ತಿಯಾಗಿದೆ. ಇದರ ಬಗ್ಗೆ ಚರ್ಚೆ ಮಾಡಿದ್ದೀರಾ ಸಿದ್ದರಾಮಯ್ಯನವರೇ?...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
""ರಾಯಲ್ ಉತ್ಸವ ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಮತ"" --------------------------------------- ""ಶಿಕ್ಷಣದಲ್ಲಿ ಮೌಲ್ಯ ಇಂದಿನ ಅನಿವಾರ್ಯ ಅಗತ್ಯತೆ"" ---------------------------------- ಬೆಂಗಳೂರು: ಇಂದಿನ ಶಿಕ್ಷಣ ವ್ಯವಸ್ಥೆ ಉದ್ಯೋಗ ಕೇಂದ್ರೀಕೃತವಾಗಿ ಹೆಚ್ಚಾಗಿ ಗೋಚರಿಸುತ್ತಿದೆ, ಅದರ ಜೊತೆಗೆ ಶಿಕ್ಷಣದ ಜೊತೆಯಲ್ಲಿ ಮೌಲ್ಯ ಮತ್ತು ವ್ತಕ್ತಿತ್ವ ವಿಕಸನದ ಶಿಕ್ಷಣ ಇಂದಿನ ಅನಿವಾರ್ಯ ಅಗತ್ಯತೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಂದು ವ್ಯಕ್ತಪಡಿಸಿದರು.ಅವರು ನಗರದ ಮತ್ತಿಕೆರೆಯ ರಾಯಲ್ ಕಾಲೇಜ್ ಆಯೋಜಿಸಿದ್ದ ರಾಯಲ್ ಉತ್ಸವ ೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿಕ್ಷಣವು ಹಣ ಗಳಿಸುವುದು ಹೇಗೆ ಎಂದು ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಸುಸಂಸ್ಕೃತ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸಬೇಕು,ಆ ಕೆಲಸವನ್ನು ರಾಯಲ್ ಕಾಲೇಜ್ ಮಾಡುತ್ತಿದೆ ಎಂದರು. ಈ ವೇದಿಕೆಯಲ್ಲಿ ಖ್ಯಾತ ಶಿಕ್ಷಣ ತಜ್ಞರಾದ ವೂಡೇ ಕೃಷ್ಣ ಅವರಿಗೆ ರಾಯಲ್ ಜ್ಞಾನ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಸಮಯ ಬಹಳ ಅತ್ಯಮೂಲ್ಯವಾಗಿರುವಂತದ್ದು  ನೀವು ಪ್ರತಿಯೊಂದು ವಿಷಯದಲ್ಲಿಯೂ ಅಭ್ಯಾಸವನ್ನು ಸರಿಯಾದ ಮಾರ್ಗದಲ್ಲಿ ಮಾಡಿದ್ದೆ ಆದರೆ ನಿಮ್ಮ ಮುಂದಿನ ಯಶಸ್ಸು ನಿಮಗೆ ದಾರಿದೀಪ ವಾಗುತ್ತಿದೆ ಎ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
""ಲಕ್ಷ ಕಂಠ ಗೀತಾವಾಚನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ '' ಉಡುಪಿ:  ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರು ಇಂದು ಉಡುಪಿಯಲ್ಲಿ ಲಕ್ಷ ಕಂಠ ಗೀತಾಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವ ಸಂಕಲ್ಪ ಭಾರತೀಯರು ಪಾಲನೆ ಮಾಡಬೇಕಾದ ಸಂಕಲ್ಪಗಳು.    1.ನೀರು ಮತ್ತು ನದಿಗಳ ಸಂರಕ್ಷಣೆ ಮಾಡುವುದು.  2.ಪ್ರತಿಯೊಬ್ಬರು ತಾಯಿಯ ಹೆಸರಿನಲ್ಲಿ ಒಂದು ಸಸಿಯನ್ನು ನೆಟ್ಟು ಬೆಳೆಸುವುದು. 3.ದೇಶದ ಒಬ್ಬ ಬಡವನ ಬದುಕನ್ನು ಸುಧಾರಿಸಲು ಸಹಕರಿಸಬೇಕು.  4.ಸ್ವದೇಶಿಯ ಬಗ್ಗೆ ಚಿಂತನಶೀಲರಾಗಿರಬೇಕು ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಬೇಕು.  5.ಆರೋಗ್ಯಕರ ಮತ್ತು ಸಮತೋಲನ ಆಹಾರ ಪದ್ಧತಿ, ಅಳವಡಿಸಿಕೊಳ್ಳಬೇಕು . 6.ಸಾವಯವ ಕೃಷಿಗೆ ಹೆಚ್ಚು ಮಹತ್ವವನ್ನು ನೀಡಬೇಕು  ಸಾವಯವ ಕೃಷಿಗೆ ಹೆಚ್ಚು ಮಹತ್ವವನ್ನು ನೀಡಬೇಕು.  7.ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿಕೊಳ್ಳಬೇಕು . 8.ದೇಶದಲ್ಲಿರುವ ಕನಿಷ್ಠ 25 ಐತಿಹಾಸಿಕ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಬೇಕು.  9.ವಿಕಸಿತಾ ಭಾರತ ನಿರ್ಮಾಣ ಮಾಡಬೇಕು ಕರ್ನಾಟಕ ವಿಕಸಿತ ರಾಜ್ಯ ಆಗಬೇಕು.  ಎಂದು ಒಂಬತ್ತು ಸಂಕಲ್ಪಗಳನ್ನ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಜಿ ಅವರು ರಾಜ್ಯ ಮತ್ತು ರಾಷ್ಟ್ರ ಜನತೆಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ  ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
 ""ಜೆಡಿಎಸ್ ಪಕ್ಷದಿಂದ ರಾಜ್ಯ ಮತ್ತು ರಾಷ್ಟ್ರೀಯ ಪರಿಷತ್ ಗಳ ಸಭೆ ಹಾಗೂ ರಾಷ್ಟೀಯ ಸಮಾವೇಶ "" ಬೆಂಗಳೂರು :  ಪಕ್ಷದ ರಾಷ್ಟ್ರೀಯ ಪರಿಷತ್ ಮತ್ತು ರಾಷ್ಟೀಯ ಸಮಾವೇಶದ ಅಂಗವಾಗಿ ಪಕ್ಷದ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ ಸಂಜೆ ನಾಲ್ಕು ಗಂಟೆಗೆ ದ್ವಜಾರೋಹಣ ನಡೆಸಲಾಗುವುದು. ನಂತರ ಸಂಜೆ 5 ಗಂಟೆಗೆ ಪಕ್ಷದ ರಜತ ಮಹೋತ್ಸವ ಆಚರಣೆ ಅಂಗವಾಗಿ ಪಕ್ಷ ನಡೆದು ಬಂದ ದಾರಿ   ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಸಾಧನೆ ಕುರಿತು ಪ್ರದರ್ಶಿಸಿ ಉದ್ಘಾಟನೆ ನಡೆಸಲಾಗುವುದು. ಸಂಜೆ 6:30ಕ್ಕೆ ಪಕ್ಷದ ರಾಜ್ಯ ಪರಿಷತ್, ರಾಷ್ಟೀಯ ಪರಿಷತ್ ವಿವಿಧ ರಾಜ್ಯಗಳಿಂದ ಬಂದಿರುವ ಪ್ರತಿನಿಧಿಗಳ ಜತೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದೆ. ಸಭೆಯಲ್ಲಿ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್  ರಾಷ್ಟ್ರೀಯ ಅಧ್ಯಕ್ಷರಾದ  H.D. ದೇವೇಗೌಡರು ಮತ್ತು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ Hd ಕುಮಾರಸ್ವಾಮಿ ಅವರು  ಕೋರ್ ಕಮಿಟಿ ಸದಸ್ಯರು ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗಿಯಾಗುತ್ತಾರೆ. .

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
*ವರ್ಗ, ವರ್ಣರಹಿತ ಸಮಾಜ ನಿರ್ಮಾಣ ಮಾಡಿದವರು ವಿಶ್ವಗುರು ಅಣ್ಣ ಬಸವಣ್ಣ, ಕೆಲವು ಖಾವಿಧಾರಿಗಳು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ-ವಿಜಯಾನಂದ್ ಎಸ್.ಕಾಶಪ್ಪನವರ್*  ಬೆಂಗಳೂರು ಬೆಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ವೀರಶೈವ -ಲಿಂಗಾಯಿತ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರು, ಶಾಸಕರಾದ ವಿಜಯಾನಂದ ಎಸ್.ಕಾಶಪ್ಪನವರ್ ರವರ ಜೊತೆಯಲ್ಲಿ ಮಾಧ್ಯಮ ಸಂವಾದ. ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಶರಣಬಸಪ್ಪ, ಹಿರಿಯ ಪತ್ರಕರ್ತರಾದ ಯಾಸಿರ್, ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹಡಗಲಿ ಅರುಣ್ ಕುಮಾರ್ ರವರು ಉಪಸ್ಥಿತರಿದ್ದರು. *ವಿಜಯಾನಂದ್ ಎಸ್.ಕಾಶಪ್ಪನವರ್ ರವರು* ಮಾತನಾಡಿ ರಾಜಕೀಯ ಹಿನ್ನಲೆ ಇರುವ ಕುಟುಂಬ ನಮ್ಮದು. ನಮ್ಮ ತಂದೆಯವರು ಕೃಷಿ ಸಹಕಾರ ಪತ್ತಿನ ಸಹಕಾರ ಸಂಘ ಮತ್ತು 1979ರಲ್ಲಿ ತಾಲೂಕ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಜನರ ಮತ್ತು ರೈತರ ನಡುವೆ ಗುರುತಿಸಿಕೊಂಡು ವೇಗವಾಗಿ ರಾಜಕೀಯದಲ್ಲಿ ಬೆಳವಣಿಗೆ ಪ್ರಾರಂಭವಾಯಿತು. ಮೂರು ಬಾರಿ ಶಾಸಕರಾಗಿ ನನ್ನ ತಂದೆಯವರು , ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು.  ನಾನು ಎಂ.ಎಸ್.ರಾಮಯ್ಯದಲ್ಲಿ ವೈದ್ಯಕೀಯ ವ್ಯಾಸಂಗ ಮುಗಿಸಿದೆ.1992ರಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರವರ ರಾಜಕೀಯ...

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

Image
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ : ಸಂಭ್ರಮಾಚರಣೆ ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಬಳಿ ಇಂದು ಮಧ್ಯಾಹ್ನ ಬಿಹಾರ ವಿಧಾನಸಭಾ ಚುನಾವಣೆಯ ಅದ್ಭುತ ಗೆಲುವಿನ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಶಾಸಕ ಡಾ. ಚಂದ್ರು ಲಮಾಣಿ, ಸಿಮೆಂಟ್ ಮಂಜುನಾಥ್, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ಮಾಜಿ ಸಂಸದ ಡಾ. ಉಮೇಶ್ ಜಾಧವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಎಸ್‍ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ‘ಇಂದು ಬಿಹಾರ, ನಾಳೆ ಕರ್ನಾಟಕ’ ‘ಭಾರತ್ ಮಾತಾಕೀ ಜೈ’ ‘ನರೇಂದ್ರ ಮೋದಿಜೀ ಕೀ ಜೈ’ ‘ಬಿಜೆಪಿಗೆ ಜಯವಾಗಲಿ’ –ಇವೇ ಮೊದಲಾದ ಘೋಷಣೆಗಳನ್ನು ಕೂಗಲಾಯಿತು. ಕಾರ್ಯಕರ್ತರು ಎಲ್ಲಿ ನೋಡು ಅಲ್ಲಿ ನೋಡು ಬಿಜೆಪಿ ಎಂಬ ಘೋಷಣೆ ಕೂಗುತ್ತ, ಧ್ವಜ ...