ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್



""ಅಟಲ್‍ಜೀ ದೇಶಭಕ್ತಿ, ನಾಯಕತ್ವ ಗುಣಗಳು ಅನುಕರಣಾರ್ಹ- ಶೋಭಾ ಕರಂದ್ಲಾಜೆ""

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಯವರ ದೇಶಭಕ್ತಿ, ಸರಳತೆ, ನಾಯಕತ್ವ ಗುಣಗಳು ಅನುಕರಣಾರ್ಹ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಶತಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಅಟಲ್ ಜೀ ಶತಮಾನೋತ್ಸವ ಅಭಿಯಾನದ ಪ್ರಮುಖರು ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿದರು. ಅಲ್ಲದೆ, ಅಟಲ್ ಜೀ ಅವರ ಒಡನಾಟದ ಕುರಿತು ಮಾಹಿತಿ ಸಂಗ್ರಹಿಸಿದರು.
ಶೋಭಾ ಕರಂದ್ಲಾಜೆಯವರು ಅಟಲ್ ಜೀ ಅವರು ಸೇವೆ, ಕಾರ್ಯಕರ್ತರಿಗೆ ಪ್ರೇರಣೆ ನೀಡುವುದು, ಪಕ್ಷದ ಸಂಘಟನೆ ವಿಷಯಗಳಲ್ಲಿ ಮಾರ್ಗದರ್ಶನ ಮಾಡಿದ್ದರು ಎಂದು ನೆನಪಿಸಿದರು.
ಈ ಕಾರ್ಯಕ್ರಮದಲ್ಲಿ ಅಟಲ್ ಜೀ ಶತಮಾನೋತ್ಸವ ಅಭಿಯಾನದ ರಾಜ್ಯ ಪ್ರಮುಖರಾದ ಡಾ. ಶಿವಯೋಗಿ ಸ್ವಾಮಿ, ರಾಜ್ಯ ಸಂಚಾಲಕ ಜಗದೀಶ ಹಿರೇಮನಿ, ರಾಜ್ಯ ಸಮಿತಿ ಸದಸ್ಯರಾದ ಬಿ.ಸಿ.ಸದಾಶಿವಯ್ಯ, ಪಿ.ಎನ್.ಸದಾಶಿವ್, ಶ್ರೀಮತಿ ಮಮತಾ ಉದಯ್, ವೆಂಕಟಪ್ರಸಾದ್ ಮಾಲೆಪಾಟಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.