ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಪದ್ಮಶ್ರೀ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಾಗೂ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.''
ಬೆಂಗಳೂರು :ನಗರದ ಪದ್ಮಶ್ರೀ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಸೈನ್ಸ್ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವಥ್ ನಾರಾಯಣ್ ರವರು ಉದ್ಘಾಟಿಸಿದರು.
ನಂತರ ಪಿಯು ಮತ್ತು ಪದವಿ ಕಾಲೇಜು ಶಿಕ್ಷಕರು ಸೇರಿದಂತೆ ಬೆಂಗಳೂರು ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ ಶಿಕ್ಷಕರನ್ನು ಸನ್ಮಾನಿಸಿದರು. ನಂತರ ದೇಶವನ್ನು ಶಕ್ತಿಯುತವಾಗಿ ಕಟ್ಟಲು ನಮ್ಮ ಶಿಕ್ಷಕರು ಬಹಳ ಮುಖ್ಯ""ಗುರುವೇ ದೇವೋ ಭವ "" ""ಪಿತೃ ದೇವೋ ಭವ""ಎಂಬುವ ವಾಕ್ಯವು ಗುರು ಇಲ್ಲದ ದೇಶ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಇಲ್ಲ ಹಾಗೆ ಪಿತೃ ಇಲ್ಲದ ಮನೆ ಸರಿಯಾದ ದಿಕ್ಕಿನಲ್ಲಿ ಸಾಗದು ಹಾಗೆ ಸಂಸ್ಕಾರದ ಮೌಲ್ಯಗಳನ್ನು ಮಾತ್ರ ಕಂಡುಕೊಳ್ಳುತ್ತೇವೆ ಹಾಗೆ ಕತ್ತಲಿಂದ ಬೆಳಕಿನ ಕಡೆ ಕೊಂಡೊಯ್ಯುವಂತಹ ಮತ್ತು ಮೌಲ್ಯಗಳನ್ನು ತುಂಬುವಂತಹ ಶಿಕ್ಷಕರಿಗೆ ನಾವು ಈ ದಿನ ಎಷ್ಟು ಕೃತಜ್ಞತೆಗಳು ಸಲ್ಲಿಸಿದರು ಸಾಲದು ಎಂದರು ಹಾಗೆ "ರಾಷ್ಟ್ರೀಯ ಶಿಕ್ಷಣ ನೀತಿಯು" ಶಿಕ್ಷಣ ಮತ್ತು ಮೌಲ್ಯ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ ಏಕೆಂದರೆ ಮುಂದಿನ ದಿನಗಳಲ್ಲಿ ಯಾವುದೇ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವ ತನ ಜೀವನವನ್ನು ಕಟ್ಟಿಕೊಳ್ಳಲು ಬೇಕಾಗುವಂತಹ ಶಿಕ್ಷಣ ಕೌಶಲ್ಯ ತರಬೇತಿ ಸರ್ವಾಂಗೀಣ ಅಭಿವೃದ್ಧಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಬಹಳ ಮುಖ್ಯವಾಗಿ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸತೀಶ್, ಪ್ರಾಂಶುಪಾಲರಾದ ಡಾ. ಅನುರಾಧ ಎಂ. ಮತ್ತು ಉಪ ಪ್ರಾಂಶುಪಾಲರಾದ ಡಾ.ತಮ್ಮಯ್ಯ ಆರ್.ಬಿ. ಹಾಗೂ ಹಲವು ಕಾಲೇಜಿಂದ ಬಂದಿದ್ದ ಶಿಕ್ಷಕರು ಹಾಗೂಕಾಲೇಜಿನ ಬೋಧಕ ಹೋದಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು .