ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಪಿ ಎನ್ ಕೃಷ್ಣಮೂರ್ತಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಎಸ್ ಮುನಿರಾಜು ರವರ ನೇತೃತ್ವದಲ್ಲಿ ಸೇರ್ಪಡೆ ""
ಪೀಣ್ಯ ದಾಸರಹಳ್ಳಿ : ಭಾರತೀಯ ಜನತಾ ಪಕ್ಷದ ತತ್ವ ಸಿದ್ದಂತಗಳನ್ನು ಒಪ್ಪಿ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಕೆಲಸಗಳು ಮೆಚ್ಚಿ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷಕ್ಕೆ ವಿದ್ಯುಕ್ತವಾಗಿ ಮಾಜಿ ಬಿಜೆಪಿ ಶಾಸಕ ಎಸ್ ಮುನಿರಾಜು ರವರ ನೇತೃತ್ವದಲ್ಲಿ ಪಿಎನ್ ಕೃಷ್ಣಮೂರ್ತಿ ಸೇರ್ಪಡೆಯಾದರು ಸೇರ್ಪಡೆಯಾದ ನಂತರ ಅವರು ಕಾಂಗ್ರೆಸ್ಸಲ್ಲಿ ಇದುಕೊಂಡು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಬಡ ಮತ್ತು ನಿರ್ಗತಿಕೆರಿಗೆ ಹಾಗೆ ಪಕ್ಷ ಸಂಘಟನೆ ಮಾಡಲು ಸಾಕಷ್ಟು ಶ್ರಮ ವಹಿಸಿದ್ದೇನೆ ಕಾಂಗ್ರೆಸ್ ಪಕ್ಷಕ್ಕೆ ಲಕ್ಷಾಂತರ ಜನರನ್ನ ನೊಂದಣಿ ಮಾಡಿಸಿದ್ದೇನೆ ಹಾಗೆ ಕೊರೋನಾ ವೇಳೆಯಲ್ಲಿ ಲಕ್ಷಾಂತರ ಆಹಾರದ ದಿನಸಿ ಕಿಟ್ಟು ಗಳನ್ನು ತರಕಾರಿಗಳನ್ನು ಮತ್ತು ದೇವಸ್ಥಾನಗಳಿಗೆ ಹಣ ನೀಡಿದ್ದೇನೆ ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದಾರೆ ಕೇಂದ್ರ ಮತ್ತು ರಾಜ್ಯದ ನಾಯಕರು ನನಗೆ ಟಿಕೆಟ್ ಅನ್ನು ಕೊಡದೆ ನನ್ನ ಅಪಮಾನ ಮಾಡಿದ್ದಾರೆ ಆದ ಕಾರಣ ನಾನು ಮತ್ತು ನನ್ನ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ ಆಗಿದ್ದೇವೆ ಎಂದು ಸುವರ್ಣ ಟೈಮ್ಸ್ ಆಫ್ ಕರ್ನಾಟಕ ವರದಿಗಾರರಾದ ಪ್ರಸನ್ನ ಕುಮಾರ್ ಅವರಿಗೆ ಈ ರೀತಿ ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ಜಿ. ಮರಿಸ್ವಾಮಿ ಅಭಿನಂದನೆಗಳನ್ನು ಸಲ್ಲಿಸಿ ಹಾಗೂ ಶುಭ ಕೋರಿದರು. ಹಾಗೆ ಇನ್ನು ಬಿಜೆಪಿ ಮುಖಂಡರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು